- ಡಿವೈಸ್ ಬಳಸುವ ಮೊದಲು ಸುರಕ್ಷತೆ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಅನಧಿಕೃತ ಕೇಬಲ್ಗಳು, ಪವರ್ ಅಡಾಪ್ಟರ್ಗಳು ಅಥವಾ ಬ್ಯಾಟರಿಗಳನ್ನು ಬಳಸುವುದರಿಂದ ಸ್ಫೋಟಕ್ಕೆ, ಅಗ್ನಿ ದುರಂತಕ್ಕೆ ಹಾಗೂ ಇನ್ನಿತರ ಅಪಾಯಗಳಿಗೆ ಕಾರಣವಾಗಬಹುದು.
- ನಿಮ್ಮ ಡಿವೈಸ್ಗೆ ಹೊಂದಿಕೆಯಾಗುವ ಸೂಕ್ತ, ಅಧಿಕೃತ ಸಾಧನಗಳನ್ನೇ ಬಳಸಿ.
- ಈ ಡಿವೈಸ್ ಅನ್ನು 0°C ~ 40°C ತಾಪಮಾನದಲ್ಲಿ ಬಳಸುವುದು ಸೂಕ್ತ. ಹಾಗೆಯೇ, ಅದನ್ನು ಮತ್ತು ಅದರ ಅಕ್ಸೆಸರಿಗಳನ್ನು -20°C ~ 45°C. ತಾಪಮಾನದಲ್ಲಿರಿಸುವುದು ಒಳ್ಳೆಯದು. ಈ ತಾಪಮಾನಕ್ಕಿಂತ ಹೆಚ್ಚಿರುವ ವಾತಾವರಣದಲ್ಲಿ ಡಿವೈಸ್ ಬಳಸುವುದರಿಂದ ಅದಕ್ಕೆ ಹಾನಿಯಾಗುವ ಸಂಭವವಿರುತ್ತದೆ.
- ನಿಮ್ಮ ಡಿವೈಸ್ನಲ್ಲಿ ಬಿಲ್ಟ್-ಇನ್ ಬ್ಯಾಟರಿ ಇದ್ದರೆ, ಅದರ ಅಥವಾ ಡಿವೈಸ್ನ ಹಾನಿಯನ್ನು ತಪ್ಪಿಸಲೆಂದು ಅದನ್ನು ಬದಲಾಯಿಸುವ ಸಾಹಸಕ್ಕೆ ಕೈ ಹಾಕಬೇಡಿ.
- ಈ ಡಿವೈಸ್ ಅನ್ನು ಅದರೊಂದಿಗೆ ನೀಡಲಾಗಿರುವ ಅಥವಾ ಅಧಿಕೃತ ಕೇಬಲ್ ಮತ್ತು ಪವರ್ ಅಡಾಪ್ಟರ್ ಮೂಲಕ ಮಾತ್ರ ಚಾರ್ಜ್ ಮಾಡಿ. ಅನ್ಯ ಅಡಾಪ್ಟರ್ಗಳನ್ನು ಬಳಸುವುದರಿಂದ ಸ್ಫೋಟವಾಗುವ, ಶಾಕ್ ಹೊಡೆಯುವ ಮತ್ತು ನಿಮ್ಮ ಡಿವೈಸ್ಗಳಿಗೆ, ಅಡಾಪ್ಟರ್ಗಳಿಗೆ ಹಾನಿಯಾಗುವ ಸಂಭವವಿರುತ್ತದೆ.
- ಚಾರ್ಜಿಂಗ್ ಪೂರ್ಣಗೊಂಡ ಬಳಿಕ, ಅಡಾಪ್ಟರ್ ಅನ್ನು ಡಿವೈಸ್ ಮತ್ತು ಪವರ್ ಔಟ್ಲೆಟ್ನಿಂದ ಬೇರ್ಪಡಿಸಿ. ಡಿವೈಸ್ ಅನ್ನು 12 ಗಂಟೆಗಳಿಗಿಂತ ಜಾಸ್ತಿ ಚಾರ್ಜ್ ಮಾಡಬೇಡಿ.
- ಪ್ಲಗ್ ಅಥವಾ ಪವರ್ ಕಾರ್ಡ್ ಅನ್ನು ನೀವಾಗಿಯೇ ಬದಲಾಯಿಸಲು ಹೋಗಬೇಡಿ. ಚಾರ್ಜರ್ ಸ್ವಚ್ಛಗೊಳಿಸುವ ಮೊದಲು ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿ.
- ಡಿವೈಸ್ ಅಥವಾ ಹಳೆಯ ಬ್ಯಾಟರಿಗಳನ್ನು ದೈನಂದಿನ ಕಸದಲ್ಲಿ ಬಿಸಾಕಬೇಡಿ. ಸರಿಯಾಗಿ ನಿರ್ವಹಿಸದಿದ್ದರೆ ಬ್ಯಾಟರಿಗಳು ಸ್ಫೋಟಗೊಳ್ಳಬಹುದು ಅಥವಾ ಬೆಂಕಿ ಹೊತ್ತಿಕೊಳ್ಳಬಹುದು. ಡಿವೈಸ್, ಬ್ಯಾಟರಿಗಳು ಮತ್ತಿತರ ಆಕ್ಸೆಸರಿಗಳನ್ನು ಬಿಸಾಕುವಾಗ ಸ್ಥಳೀಯ ನಿಯಮಗಳನ್ನು ಅನುಸರಿಸಿ.
- ಬ್ಯಾಟರಿಯನ್ನು ಮರು-ಉಪಯೋಗ ಮಾಡಬೇಕು ಅಥವಾ ಮನೆಯ ಕಸದಿಂದ ಪ್ರತ್ಯೇಕವಾಗಿ ಬಿಸಾಕಬೇಕು. ಬ್ಯಾಟರಿಯನ್ನು ಸರಿಯಾಗಿ ನಿಭಾಯಿಸದಿದ್ದರೆ ಬೆಂಕಿ ಹೊತ್ತಿಕೊಳ್ಳಬಹುದು ಅಥವಾ ಸ್ಫೋಟಗೊಳ್ಳಬಹುದು. ಡಿವೈಸ್, ಅದರ ಬ್ಯಾಟರಿ ಮತ್ತು ಅಕ್ಸೆಸರಿಗಳನ್ನು ಸ್ಥಳೀಯ ನಿಯಮಗಳಿಗೆ ಅನುಸಾರವಾಗಿ ಬಿಸಾಕಿ ಇಲ್ಲವೇ ಮರು-ಉಪಯೋಗ ಮಾಡಿ.
- ಬ್ಯಾಟರಿಯನ್ನು ಬಿಚ್ಚಬೇಡಿ, ಒಡೆಯಬೇಡಿ ಅಥವಾ ಸುಡಬೇಡಿ. ಬ್ಯಾಟರಿಯನ್ನು ಬಿಚ್ಚುವ ಮೊದಲು ಅದರ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ.
- ಅತೀಯಾಗಿ ಬಿಸಿಯಾಗುವಿಕೆ, ಸುಡುವುದು ಅಥವಾ ಇತರ ವೈಯಕ್ತಿಕ ಗಾಯಗಳನ್ನು ತಪ್ಪಿಸಲು ಬ್ಯಾಟರಿಯನ್ನು ಶಾರ್ಟ್ ಸರ್ಕ್ಯೂಟ್ ಮಾಡಬೇಡಿ.
- ಬ್ಯಾಟರಿಯನ್ನು ಹೆಚ್ಚಿನ ತಾಪಮಾನದ ವಾತಾವರಣಗಳಲ್ಲಿ ಇಡಬೇಡಿ. ಅತೀಯಾದ ಹೀಟಿಂಗ್ ಸ್ಫೋಟಕ್ಕೆ ಕಾರಣವಾಗಬಹುದು.
- ಬ್ಯಾಟರಿ ಸೋರಿಕೆ ತಡೆಯಲು, ಅತಿಯಾದ ಹೀಟಿಂಗ್ ಅಥವಾ ಸ್ಫೋಟವನ್ನು ತಡೆಯಲು ಬ್ಯಾಟರಿಯನ್ನು ಬಿಚ್ಚುವುದು, ಕುಟ್ಟುವುದು ಮತ್ತು ಪುಡಿಗಟ್ಟುವುದನ್ನು ಮಾಡಬೇಡಿ.
- ಬ್ಯಾಟರಿಗಳನ್ನು ಸುಡಬೇಡಿ. ಅದು ಬೆಂಕಿ ಅನಾಹುತ ಅಥವಾ ಸ್ಫೋಟಗಳಿಗೆ ಕಾರಣವಾಗುತ್ತದೆ.
- ಬ್ಯಾಟರಿಯನ್ನು ಬಿಚ್ಚುವ ಮೊದಲು ಅದರ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ.
- ಬ್ಯಾಟರಿ ಕಂದು ಬಣ್ಣಕ್ಕೆ ತಿರುಗುತ್ತಿದ್ದರೆ, ಸಡಿಲವಾಗಿದ್ದರೆ, ಅಸಹಜವಾಗಿ ಕಾಣುತ್ತಿದ್ದರೆ ಅಥವಾ ಉಬ್ಬಿದ್ದರೆ ಅದರ ಬಳಕೆಯನ್ನು ಆ ಕ್ಷಣದಲ್ಲಿಯೇ ನಿಲ್ಲಿಸಿಬಿಡಿ
- ನಿಮ್ಮ ಡಿವೈಸ್ ಅನ್ನು ಒದ್ದೆ ಮಾಡಬೇಡಿ. ಬಿಸಿ ಮತ್ತು ಹಸಿ ಇರುವ ಸ್ಥಳದಲ್ಲಿ ಅಥವಾ ಬೆಂಕಿಯ ಬಳಿ ಉತ್ಪನ್ನ ಹಾಗೂ ಇತರ ಸಾಧನಗಳನ್ನು ಇಡಬೇಡಿ ಅಥವಾ ಬಳಸಬೇಡಿ.
- ಡಿವೈಸ್ ಅಥವಾ ಅದರೊಂದಿಗಿನ ಆಕ್ಸಸರಿಗಳನ್ನು ಮಾರ್ಪಡಿಸಬೇಡಿ ಅಥವಾ ಬಿಚ್ಚಬೇಡಿ. ಹಾಗೆ ಮಾಡಿದರೆ ವಾರಂಟಿ ವ್ಯರ್ಥವಾಗುತ್ತದೆ. ಡಿವೈಸ್ನ ಯಾವುದೇ ಭಾಗ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, Mi ಗ್ರಾಹಕ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ದೃಢೀಕೃತ ರಿಪೇರಿ ಕೇಂದ್ರಕ್ಕೆ ಕೊಂಡೊಯ್ಯಿರಿ.
- ಶ್ರವಣ ಸಂಬಂಧಿ ಸಮಸ್ಯೆಗಳನ್ನು ತಡೆಯಲು, ಹೆಚ್ಚು ವಾಲ್ಯೂಮ್ನಲ್ಲಿ ತುಂಬಾ ಹೊತ್ತು ಕೇಳಬೇಡಿ.
- ಡಿವೈಸ್ ಸ್ವಚ್ಛಗೊಳಿಸುವ ಮತ್ತು ಅದನ್ನು ನಿಭಾಯಿಸುವ ಮೊದಲು, ಎಲ್ಲಾ ಆಪ್ಗಳನ್ನು ಮುಚ್ಚಿ ಮತ್ತು ಬೇರೆಲ್ಲಾ ಡಿವೈಸ್ಗಳು/ಕೇಬಲ್ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸಿ.
- ಡಿವೈಸ್ ಮತ್ತು ಅದರ ಅಕ್ಸೆಸರಿಗಳನ್ನು ಒರೆಸಲು ಒಣಗಿದ, ಮೆತ್ತನೆಯ ಬಟ್ಟೆ ಬಳಸಿ. ಡಿವೈಸ್ ಅಥವಾ ಅದರ ಅಕ್ಸೆಸರಿಗಳನ್ನು ಸ್ವಚ್ಛಗೊಳಿಸಲು ಕಠಿಣ ರಾಸಾಯನಿಕಗಳು ಅಥವಾ ಡಿಟರ್ಜೆಂಟ್ಗಳನ್ನು ಬಳಸಬೇಡಿ.
- ಡಿವೈಸ್ ಮತ್ತು ಅದರ ಅಕ್ಸೆಸರಿಗಳನ್ನು ಒಣಗಿಸಲು ಮೈಕ್ರೋವೇವ್ ಅಥವಾ ಹೇರ್ ಡ್ರೈಯರ್ ತರಹದ ಬಿಸಿ ಮಾಡುವ ಹೊರಗಿನ ಸಾಧನಗಳನ್ನು ಬಳಸಬೇಡಿ.
ಮಕ್ಕಳ ಸುರಕ್ಷತೆ
- ಡಿವೈಸ್ ಮತ್ತು ಎಲ್ಲಾ ಅಕ್ಸೆಸರಿಗಳನ್ನು ಮಕ್ಕಳ ಕೈಗೆ ಸಿಗದಂತೆ ದೂರವಿಡಿ. ಮಕ್ಕಳು ಡಿವೈಸ್ಗಳೊಂದಿಗೆ ಅಥವಾ ಯಾವುದೇ ಅಕ್ಸೆಸರಿಗಳೊಂದಿಗೆ ಆಟವಾಡಲು, ಕಚ್ಚಲು, ನುಂಗಲು ಅವಕಾಶ ಕೊಡಬೇಡಿ. ಗಂಟಲಲ್ಲಿ ಸಿಕ್ಕಿಕೊಳ್ಳುವ, ಉಸಿರುಗಟ್ಟುವ ಸಂಭವಗಳಿರುತ್ತವೆ.
ತುರ್ತು ಕರೆಗಳನ್ನು ಮಾಡುವುದು
- ಸೇವಾ ನೆಟ್ವರ್ಕ್ಗಳು ಮತ್ತು ಇತರ ಪ್ರಾಂತೀಯ ವ್ಯತ್ಯಾಸಗಳಿಂದಾಗಿ ಎಲ್ಲಾ ಸ್ಥಳಗಳಿಂದ ಮತ್ತು ಎಲ್ಲಾ ಸಂದರ್ಭಗಳಲ್ಲಿ ಕರೆ ಮಾಡಲು ಡಿವೈಸ್ಗೆ ಸಾಧ್ಯವಾಗದೇ ಇರಬಹುದು. ಆದ್ದರಿಂದ, ದಯವಿಟ್ಟು ಮಹತ್ವದ ಅಥವಾ ತುರ್ತು ಕರೆಗಳನ್ನು ಮಾಡಲು ನಮ್ಮ ಡಿವೈಸ್ ಅನ್ನೆ ಅವಲಂಬಿಸಬೇಡಿ. Mi ಪ್ಯಾಡ್ನಲ್ಲಿ ಕರೆ ಮಾಡುವಿಕೆಗೆ ಬೆಂಬಲವಿಲ್ಲ.
ಸುರಕ್ಷತೆಯ ಮುನ್ನೆಚ್ಚರಿಕೆಗಳು
- ನಿರ್ಧಿಷ್ಟ ಸಂದರ್ಭಗಳು ಮತ್ತು ವಾತಾವರಣದಲ್ಲಿ ಮೊಬೈಲ್ ಬಳಸಬಾರದು ಎಂಬ ಕಾನೂನು ಇದ್ದರೆ ಅದನ್ನು ಕಡ್ಡಾಯವಾಗಿ ಅನುಸರಿಸಿ.
- ಪೆಟ್ರೋಲ್ ಬಂಕ್ ಹಾಗೂ ಅಥವಾ ಇತರ ಸ್ಫೋಟದ ಅಪಾಯವಿರುವ ಸ್ಥಳದಲ್ಲಿ ನಿಮ್ಮ ಫೋನ್ ಬಳಸಬೇಡಿ. ಅಲ್ಲಿ ಪೆಟ್ರೋಲ್ ಬಂಕ್, ಗ್ಯಾಸ್ ಗೋಡನ್ಗಳು, ಬೋಟ್ನ ಕೆಳಭಾಗ, ರಾಸಾಯನಿಕಗಳ ವರ್ಗಾವಣೆ ಅಥವಾ ಸಂಗ್ರಹಣೆ ಪ್ರದೇಶಗಳ ವಾತಾವರಣದಲ್ಲಿನ ಧೂಳು ಅಥವಾ ಮೆಟಲ್ ಪೌಡರ್ ತರಹದ ರಾಸಾಯನಿಕ ಅಂಶಗಳಿರುತ್ತವೆ. ನಿಮ್ಮ ಫೋನ್ಗಳು ಅಥವಾ ರೇಡಿಯೋ ಪರಿಕರಗಳಂಥ ವೈಯರ್ಲೆಸ್ ಡಿವೈಸ್ಗಳನ್ನು ಆಫ್ ಮಾಡುವಂತೆ ಹೇಳುವ ಬೋರ್ಡ್ಗಳ ಸೂಚನೆಗಳನ್ನು ಪಾಲಿಸಿ. ಸ್ಫೋಟಕ್ಕೆ ಆಸ್ಪದ ನೀಡುವ ಸ್ಥಳಗಳಲ್ಲಿ ಮೊಬೈಲ್ ಫೋನ್ ಅಥವಾ ವೈಯರ್ಲೆಸ್ ಡಿವೈಸ್ಗಳನ್ನು ಆಫ್ ಮಾಡಿ. ಸ್ಫೋಟಕ ಕಾರ್ಯಗಳು ನಡೆಯುತ್ತಿರುವಂಥ ಹಾಗೂ "ಎರಡೂ-ಕಡೆಯ ರೇಡಿಯೋಗಳು" ಅಥವಾ "ಎಲೆಕ್ಟ್ರಾನಿಕ್ ಡಿವೈಸ್ಗಳು" ಆಫ್ ಮಾಡಬೇಕು ಎಂಬ ಸೂಚನೆ ಇರುವಂಥ ಸ್ಥಳಗಳಲ್ಲಿ ಆಫ್ ಮಾಡಿ.
- ಆಸ್ಪತ್ರೆಗಳ ಆಪರೇಶನ್ ರೂಂಗಳಲ್ಲಿ, ತುರ್ತುನಿಗಾ ಘಟಕದ ರೂಂಗಳಲ್ಲಿ ಫೋನ್ ಬಳಸದಿರಿ. ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ನಿಯಮಗಳಿಗೆ ಬದ್ಧರಾಗಿರಿ. ನಿಮ್ಮ ಡಾಕ್ಟರ್ ಮತ್ತು ಡಿವೈಸ್ ತಯಾರಕರೊಂದಿಗೆ ಚರ್ಚೆ ನಡೆಸಿ. ಫೋನ್ಗಳ ಬಳಕೆಯಿಂದ ನಿಮ್ಮ ವೈದ್ಯಕೀಯ ಪರಿಕರಗಳ ಬಳಕೆಯ ಮೇಲೇನಾದರೂ ವ್ಯತಿರಿಕ್ತ ಪರಿಣಾಮ ಬೀರುವುದೇ ಎಂಬುದನ್ನು ಅವರನ್ನು ಕೇಳಿ ತಿಳಿದುಕೊಳ್ಳಿ. ಪೇಸ್ಮೇಕರ್ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದನ್ನು ತಪ್ಪಿಸಲು ಫೋನ್ ಅನ್ನು ಅದರಿಂದ ಕನಿಷ್ಠ 15 ಸೆಂ. ಮೀ ದೂರ ಇರಿಸಿ. ಇದಕ್ಕಾಗಿ, ಪೋನ್ ಅನ್ನು ಪೇಸ್ಮೇಕರ್ಗೆ ತದ್ವಿರುದ್ಧವಾದ ಕಿವಿಯಲ್ಲಿ ಬಳಸಿ ಹಾಗೂ ಯಾವ ಕಾರಣಕ್ಕೂ ಮೇಲ್ಭಾಗದ ಜೇಬಿನಲ್ಲಿ ಬಳಸಬೇಡಿ. ವೈದ್ಯಕೀಯ ಉಪಕರಣಗಳಿಗೆ ತೊಂದರೆಯಾಗದಂತೆ ಮಾಡಲು ನಿಮ್ಮ ಫೋನ್ಗಳನ್ನು ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್ಗಳು ಇತ್ಯಾದಿಗಳ ಸಮೀಪ ಬಳಸಿದಿರಿ.
- ವಿಮಾನದ ಸುರಕ್ಷಾ ನಿಯಮಗಳನ್ನು ಗೌರವಿಸಿ ಹಾಗೂ ಅವಶ್ಯಕತೆ ಇದ್ದರೆ ವಿಮಾನ ಹತ್ತಿದ ತಕ್ಷಣ ಡಿವೈಸ್ ಆಫ್ ಮಾಡಿ.
- ಡ್ರೈವ್ ಮಾಡುವಾಗ, ಟ್ರಾಫಿಕ್ ಕಾನೂನುಗಳು ಹಾಗೂ ನಿಬಂಧನೆಗಳಿಗನುಸಾರ ಡಿವೈಸ್ ಬಳಸಿ.
- ಸಿಡಿಲಿನಿಂದ ರಕ್ಷಿಸಿಕೊಳ್ಳಲು, ಮಳೆ -ಬಿರುಗಾಳಿ ಬರುವಾಗ ಡಿವೈಸ್ ಅನ್ನು ಹೊರಗೆ ಕೊಂಡೊಯ್ಯದಿರಿ.
- ಡಿವೈಸ್ ಚಾರ್ಜ್ ಆಗುವಾಗ ಕರೆ ಮಾಡಬೇಡಿ. Mi ಪ್ಯಾಡ್ನಲ್ಲಿ ಕರೆ ಮಾಡುವಿಕೆಗೆ ಬೆಂಬಲವಿಲ್ಲ.
- ಬಾತ್ರೂಂನಂಥ ಹೆಚ್ಚಿನ ತೇವಾಂಶವಿರುವ ಸ್ಥಳಗಳಲ್ಲಿ ಡಿವೈಸ್ ಬಳಸಬೇಡಿ. ಇದು ವಿದ್ಯುತ್ ಅಫಘಾತ, ಗಾಯ, ಬೆಂಕಿ ಹಾಗೂ ಚಾರ್ಜರ್ ಹಾನಿಗಳಿಗೆ ಕಾರಣವಾಗಬಹುದು.
- ನಿರ್ಧಿಷ್ಟ ಸಂದರ್ಭಗಳು ಮತ್ತು ವಾತಾವರಣದಲ್ಲಿ ಮೊಬೈಲ್ ಬಳಸಬಾರದು ಎಂಬ ಸೂಚನೆ ಇದ್ದರೆ ಅದನ್ನು ಕಡ್ಡಾಯವಾಗಿ ಅನುಸರಿಸಿ.
- ಫ್ಲಾಷ್ ಬಳಸುವಾಗ, ಅದನ್ನು ಯಾವ ಕಾರಣಕ್ಕೂ ಜನರ ಅಥವಾ ಪ್ರಾಣಿಗಳ ಕಣ್ಣಿನ ಸಮೀಪ ತರಬೇಡಿ. ದೃಷ್ಟಿಗೆ ಹಾನಿಯಾಗುವ ಸಂಭವವಿರುತ್ತದೆ.
- ಡಿವೈಸ್ ಕಾರ್ಯನಿರ್ವಹಿಸುವಾಗ ತುಂಬಾ ಬಿಸಿಯಾದರೆ, ಅದನ್ನು ನಿಮ್ಮ ಚರ್ಮಕ್ಕೆ ತಾಗುವಂತೆ ಇರಿಸಬೇಡಿ. ಇದರಿಂದ ಕಡಿಮೆ ತಾಪಮಾನದ ಸುಡುವಿಕೆಯಿಂದ ಪಾರಾಗಬಹುದು.
- ಡಿಸ್ಪ್ಲೇನಲ್ಲಿ ಬಿರುಕು ಬಂದಿದ್ದರೆ, ಅದರ ಮೇಲಿರುವ ಚೂಪಾದ ಅಂಚುಗಳ ಬಗ್ಗೆ ಗಮನವಿರಲಿ. ಗಾಯವಾಗುವ ಸಂಭವವಿರುತ್ತದೆ. ಗಟ್ಟಿಯಾದ ವಸ್ತುವಿಗೆ ತಗುಲಿ ಅಥವಾ ಒತ್ತಡದಿಂದ ಡಿವೈಸ್ ಒಡೆದರೆ ಆ ತುಂಡುಗಳನ್ನು ತೆಗೆಯಲು ಪ್ರಯತ್ನಿಸಬೇಡಿ. ಉತ್ಪನ್ನದ ಬಳಕೆಯನ್ನು ಆ ಕ್ಷಣದಲ್ಲಿಯೇ ಸ್ಥಗಿತಗೊಳಿಸಿ ಮತ್ತು Xiaomi ಯ ಆಫ್ಟರ್-ಸೇಲ್ಸ್ ಸೇವಾ ಕೇಂದ್ರವನ್ನು ಸಂಪರ್ಕಿಸಿ.
ಭದ್ರತೆಯ ಅಧಿಸೂಚನೆ
- ಬಿಲ್ಟ್-ಇನ್ ಸಾಫ್ಟ್ವೇರ್ ಅಪ್ಡೇಟ್ ಫೀಚರ್ ಬಳಸಿಕೊಂಡು ಇಲ್ಲವೇ, ನಮ್ಮ ದೃಢೀಕೃತ ಔಟ್ಲೆಟ್ಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಡಿವೈಸ್ ಅನ್ನು ಅಪ್ಡೇಟ್ ಮಾಡಿ. ಇನ್ಯಾವುದೇ ಮಾರ್ಗದ ಮೂಲಕ ಸಾಫ್ಟ್ವೇರ್ ಅಪ್ಡೇಟ್ ಮಾಡುವುದರಿಂದ ಡಿವೈಸ್ಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ ಅಥವಾ ಡೇಟಾ ಕಳೆದುಕೊಳ್ಳುವಿಕೆ, ಭದ್ರತೆ ಸಮಸ್ಯೆಗಳು ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು.
ರೀಡಿಂಗ್ ಮೋಡ್
- ಹೊಂದಾಣಿಕಯಾಗಬಹುದಾದ Mi ಫೋನ್ಗಳಲ್ಲಿ ಮಾತ್ರ ಈ ಫೀಚರ್ ಲಭ್ಯವಿರುತ್ತದೆ.
- ಓದುವವರ ಕಣ್ಣಿಗೆ ತಂಪು ಭಾವ ನೀಡುವ ಉದ್ದೇಶದಿಂದ ಸ್ಕ್ರೀನ್ನಿಂದ ಪ್ರಕಟಗೊಳ್ಳುವ ನೀಲಿ ಬೆಳಕನ್ನು ರೀಡಿಂಗ್ ಮೋಡ್ ಸ್ವಯಂಚಾಲಿತವಾಗಿ ಕಡಿಮೆ ಮಾಡುತ್ತದೆ.
- ರೀಡಿಂಗ್ ಮೋಡ್ಗೆ ಬದಲಾಯಿಸಲಾಗುತ್ತಿದೆ:
ರೀಡಿಂಗ್ ಮೋಡ್ ಅನ್ನು ಆನ್ ಮತ್ತು ಆಫ್ ಮಾಡಲು ಎರಡು ಮಾರ್ಗಗಳಿವೆ:
1. ಅಧಿಸೂಚನೆ ಶೇಡ್ ಟಾಗಲ್ಗಳನ್ನು ತೋರಿಸಲು ಹೋಮ್ ಸ್ಕ್ರೀನ್ನ ಮೇಲಿನಿಂದ ಕೆಳಗೆ ಸ್ವೈಪ್ ಮಾಡಿ. ಬಳಿಕ, ರೀಡಿಂಗ್ ಮೋಡ್ ಟಾಗಲ್ ಅನ್ನು ಟ್ಯಾಪ್ ಮಾಡಿ.
2. ಸೆಟ್ಟಿಂಗ್ಗಳು > ಡಿಸ್ಪ್ಲೇ > ರೀಡಿಂಗ್ ಮೋಡ್ ಗೆ ಹೋಗಿ. ಅದೇ ಸ್ಕ್ರೀನ್ನಲ್ಲಿ, ರೀಡಿಂಗ್ ಮೋಡ್ ತಾನೇ ಸ್ವತಃ ಆನ್/ಆಫ್ ಆಗುವ ಸಮಯ ನಿಗದಿಪಡಿಸಬಹುದು ಮತ್ತು ಬಣ್ಣದ ತಾಪಮಾನವನ್ನು ಹೊಂದಿಸಬಹುದು.
1. 20-20-20 ನಿಯಮ: 20 ಅಡಿ ದೂರದಲ್ಲಿರುವ ವಸ್ತುವೊಂದನ್ನು ಪ್ರತೀ 20 ನಿಮಿಷಕ್ಕೊಮ್ಮೆ 20 ಸೆಕೆಂಡ್ಗಳ ಕಾಲ ದಿಟ್ಟಿಸಿ ನೋಡುವುದನ್ನು ಶಿಫಾರಸು ಮಾಡಲಾಗಿದೆ.
2. ಕಣ್ಣು ಮಿಟುಕಿಸುವುದು: ಕಣ್ಣು ಒಣಗದಂತೆ ಮಾಡಲು, ಕಣ್ಣುಗಳನ್ನು 2 ಸೆಕೆಂಡ್ಗಳ ಕಾಲ ಮುಚ್ಚಿ ಬಳಿಕ ತೆರೆದು 5 ಸೆಕೆಂಡ್ಗಳ ಕಾಲ ಎಡೆಬಿಡದೆ ಮಿಟುಗಿಸಬೇಕು.
3. ಮರುಕೇಂದ್ರಿಕರಣ: ಕಣ್ಣಿನ ಸ್ನಾಯುಗಳನ್ನು ಬಲಪಡಿಸುವ ಮತ್ತೊಂದು ಅತ್ಯುತ್ತಮ ವ್ಯಾಯಾಮವೆಂದರೆ, ಸ್ಕ್ರೀನ್ನಿಂದ ಬಹುದೂರ ಇರುವ ವಸ್ತುವನ್ನು ದಿಟ್ಟಿಸಿ ನೋಡುವುದು ನಂತರ ಹೆಬ್ಬೆಟ್ಟನ್ನು ಕಣ್ಣಿನಿಂದ 30 ಸೆಂ. ಮೀ ಅಂತರದಲ್ಲಿ ಇರಿಸಿಕೊಂಡು ದೃಷ್ಟಿಯನ್ನು ಕೇಂದ್ರಿಕರಿಸುವುದು. ಹೆಬ್ಬೆಟ್ಟನ್ನು ಇರಿಸಿ.
4. ಕಣ್ಣು ಗುಡ್ಡೆ ತಿರುಗಿಸುವುದು: ಕಣ್ಣಿನ ಗುಡ್ಡೆಯನ್ನು ಹಲವು ನಿಮಿಷಗಳ ಕಾಲ ಎಡದಿಂದ ಬಲಕ್ಕೆ ತಿರುಗಿಸುವುದು ನಂತರ ಕೆಲವು ಸೆಕೆಂಡ್ಗಳ ಕಾಲ ನಿಲ್ಲಿಸುವುದು ಬಳಿಕ ಅದರ ವಿರುದ್ಧ ದಿಕ್ಕಿನಲ್ಲಿ ಮತ್ತೊಮ್ಮೆ ಕಣ್ಣುಗುಡ್ಡೆಗಳನ್ನು ತಿರುಗಿಸುವುದು.
5. ಹಸ್ತದಿಂದ ಉಜ್ಜಿಕೊಳ್ಳುವುದು: ಎರಡೂ ಹಸ್ತಗಳನ್ನು ಒಂದನ್ನೊಂದು ಗಟ್ಟಿಯಾಗಿ ತಿಕ್ಕಿಕೊಂಡು ಅವುಗಳು ಬಿಸಿಯಾದ ಮೇಲೆ ಕಣ್ಣಿನ ಮೇಲೆ ಕೆಲವು ಸೆಕೆಂಡ್ಗಳ ಕಾಲ ಇರಿಸಿಕೊಳ್ಳಬೇಕು.